Watch - ಪರಮಪಾವನ, ದೊರಕಿದೆಯಾ ನಮ್ಮ ಭಾಗ್ಯನಿಧಿಯೆ | ಸಂಗೀತ ಸಮರ್ಪಣೆ | ಅವತಾರ ಘೋಷಣೆ |ದಸರಾ ವಿಶೇಷ |Parama Pavana |Dasara - Sri Sathya Sai | Sri Sathya Sai Media Centre
ಪರಮಪಾವನ, ದೊರಕಿದೆಯಾ ನಮ್ಮ ಭಾಗ್ಯನಿಧಿಯೆ | ಸಂಗೀತ ಸಮರ್ಪಣೆ | ಅವತಾರ ಘೋಷಣೆ |ದಸರಾ ವಿಶೇಷ |Parama Pavana |Dasara
Published on October 20, 2026 02:30 PM
Music Video
"ಪರಮಪಾವನ, ದೊರಕಿದೆಯಾ ನಮ್ಮ ಭಾಗ್ಯನಿಧಿಯೆ…"
ಭಗವಾನ್ ಬಾಬಾರವರ ಭಕ್ತವೃಂದದಲ್ಲಿ ನಾಟಕರತ್ನ ಗುಬ್ಬಿ ವೀರಣ್ಣನರವರ ಪತ್ನಿ ಗಾನವಿಶಾರದೆ ಶ್ರೀಮತಿ ಬಿ. ಜಯಮ್ಮ ಅವರು 1940ರ ದಶಕದಲ್ಲಿ ಪ್ರಮುಖ ಗಾಯಕರಾಗಿದ್ದರು. ನಟಿ ಜಯಮ್ಮರವರು ಶಿವಶಂಕರ ಸ್ವರೂಪವೇ ಭಗವಾನ್ ಬಾಬಾರವರೆಂದು ನಂಬಿ ಅವರನ್ನು ಸ್ತುತಿಸಿ ಅನೇಕ ಹಾಡುಗಳನ್ನು ರಚಿಸಿ ಹಾಡಿದ್ದಾರೆ. ಬಹಳ ಭಕ್ತಿಯಿಂದ ಮಧುರವಾಗಿ ಹಾಡುತ್ತಿದ್ದ ಆ ಹಾಡುಗಳು ಭಗವಾನರಿಗೆ ಅತ್ಯಂತ ಪ್ರಿಯವಾದುವು. ಸ್ವಾಮಿಯವರೂ ಸಹ ಈ ಹಾಡುಗಳನ್ನು ಹಾಡಿ ಸಂತೋಷಿಸುತ್ತಿದ್ದರು. ಆ ಹಾಡುಗಳಲ್ಲಿ ಒಂದು: “ಪರಮಪಾವನ, ದೊರಕಿದೆಯಾ ನಮ್ಮ ಭಾಗ್ಯ
ನಿಧಿಯೆ…”
ಸಾಹಿತ್ಯ:
ಪರಮಪಾವನ ಕರುಣಾನಿಧಿಯೇ ಪರಮಪಾವನ ಕರುಣಾಂಬುಧಿಯೇ
ದೊರಕಿದೆಯ ನಮ್ಮ ಭಾಗ್ಯನಿಧಿಯೇ (3)
ತೋರೈ ನೀ ಕೃಪೆ ದೀನರಳು (3)
ಕಾವುದೈ ಸಾಯೀಶ ನೀ ದಯೆದೊಳ್ತೋರೈ ನೀ ಕೃಪೆ ದೀನರಳು
ಕಾವುದೈ ಸಾಯೀಶ ನೀ ದಯೆದೊಳ್
ಭಕ್ತೋದ್ಧಾರ ದೀನಮಂದಾರ (2)
ಸತ್ಯಸಾಯೀಶ ಪರ್ತಿನಿವಾಸ (3)
ದೊರಕಿದೆಯ ನಮ್ಮ ಭಾಗ್ಯನಿಧಿಯೇ (3)
Meaning:
O! the most holy one… all the merciful … the ocean of compassion
We have found our treasure of fortune;
Bestow your grace upon the humble;
Protect us with your kindness, O! Lord Sai. Bestow your grace upon the humble; Protect us with your kindness, O! Lord Sai.
The uplifter of devotees, the tree of hope for the helpless;
O! Lord Sathya Sai the resident of Parthi;
We have found our treasure of fortune;
Composed by : Smt. B.Jayamma
Sung by : Smt. Lakshmi Nikhil and Kum. Saishree Anand
Flute : Kum. Vidyashree D S
Tabla : Sri. Shri Datta M G
Music Arrangements : Sri. Sai Aditya
Mixing and Mastering : Sri. Atma Swaroopa