ನವರಾತ್ರಿ ನವಸಂಕಲ್ಪ | ದಿನ 9 | ಆಸೆಗಳ ಮೇಲೆ ನಿಯಂತ್ರಣ | Navaratri NavaSankalpa | Day 9
Published on October 19, 2026 02:30 PM
Talks
ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಮ್ಮಲ್ಲಿರುವ ದುರ್ಗುಣಗಳನ್ನು ದೂರಮಾಡಿಕೊಂಡು ತ್ರಿಕರಣ ಶುದ್ಧಿಯನ್ನು ಸಾಧಿಸಲು ಸ್ವಾಮಿ ನಮಗೆ ಒಂಬತ್ತು ಅಂಶಗಳ ನೀತಿಸಂಹಿತೆಯನ್ನು ನೀಡಿದ್ದಾರೆ. ಇದನ್ನು ಕೇವಲ ತಿಳಿದುಕೊಳ್ಳುವುದಕ್ಕೆ ಸೀಮಿತಗೊಳಿಸದೆ, ಒಂದು ಸಾಧನೆಯಾಗಿ ಸ್ವೀಕರಿಸೋಣ.
ಪ್ರತಿದಿನ ಒಂದೊಂದು ನೀತಿಸಂಹಿತೆಯ ಮಹತ್ವವನ್ನು ಅರಿತು, ಅದನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರುವ ಸಂಕಲ್ಪ ಮಾಡೋಣ. ಈ ಮೂಲಕ ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಶುದ್ಧತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ನೀತಿ ಸಂಹಿತೆ: "ಆಸೆಗಳ ಮೇಲೆ ನಿಯಂತ್ರಣ” ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು, ಇದರಿಂದ ಉಳಿತಾಯವಾಗುವ ಹಣವನ್ನು ಮಾನವಕುಲದ ಸೇವೆಗಾಗಿ ವಿನಿಯೋಗಿಸುವುದು.
ನವರಾತ್ರಿ ಸಂಕಲ್ಪ: ದಿನನಿತ್ಯದ ಪರದೆಯ ಬಳಕೆಯನ್ನು ಕನಿಷ್ಠ 30 ನಿಮಿಷಗಳಷ್ಟು ಕಡಿಮೆ ಮಾಡೋಣ. ಆ ಸಮಯವನ್ನು ಭಜನೆ, ನಾಮಸ್ಮರಣೆ, ಆಧ್ಯಾತ್ಮಿಕ ಗ್ರಂಥಗಳ ಪಠಣ ಅಥವಾ ಕುಟುಂಬದವರೊಂದಿಗೆ ಪ್ರೀತಿಯಿಂದ ಕಳೆಯೋಣ. ತಂತ್ರಜ್ಞಾನವನ್ನು ಮಿತವಾಗಿ ಬಳಸುತ್ತಾ, ನಮ್ಮ ಮನಸ್ಸಿನ ಶಾಂತಿ ಮತ್ತು ಆತ್ಮವಿಕಾಸಕ್ಕೆ ಹೆಚ್ಚಿನ ಆದ್ಯತೆ ನೀಡೋಣ.
Today's Code of Conduct: Ceiling on Desires and to utilise savings generated for service to mankind.
Navaratri Sankalpa for today: Let us reduce our daily screen time by at least 30 minutes. Let us spend that time in bhajans, chanting the Divine Name, reading spiritual scriptures, or sharing loving moments with our family. Let us use technology in moderation and give greater priority to peace of mind and spiritual growth.