Watch - ಶ್ರೀ ಸತ್ಯಸಾಯಿ ಸಾಕ್ಷ್ಯಚಿತ್ರ ಭಾಗ 9 - ಜನ್ಮರಹಿತನ ಜನನ | Episode 9 | Birth of the Birthless One - Sri Sathya Sai | Sri Sathya Sai Media Centre
ಶ್ರೀ ಸತ್ಯಸಾಯಿ ಸಾಕ್ಷ್ಯಚಿತ್ರ ಭಾಗ 9 - ಜನ್ಮರಹಿತನ ಜನನ | Episode 9 | Birth of the Birthless One
Published on November 23, 2026 03:30 PM
Documentaries
ಸ್ವಾಮಿಯ ಕುರಿತಾದ ಸಾಕ್ಷ್ಯಚಿತ್ರ ಸರಣಿಯ ವಿಶೇಷ ಸಂಚಿಕೆಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಈ ಸಂಚಿಕೆ ಹಿಂದಿನ ವರ್ಷಗಳಲ್ಲಿ ಜರುಗಿದ ಭಗವಾನರ ವೈಭವಪೂರ್ಣ ಜನ್ಮದಿನೋತ್ಸವಗಳ ಸವಿನೆನಪುಗಳನ್ನು ಮೆಲುಕು ಹಾಕುತ್ತದೆ.
ಸ್ವಾಮಿಯ ಜನ್ಮದಿನಗಳು ಸದಾ ವಿಶೇಷವಾಗಿರುತ್ತಿದ್ದವು. ಏಕೆಂದರೆ, ಭಕ್ತರಿಗೆ ತಮ್ಮ ಬದುಕಿನಲ್ಲಿ ಭಗವಾನರ ದಿವ್ಯ ಸಾನ್ನಿಧ್ಯವನ್ನು ಸಂಭ್ರಮದಿಂದ ಆಚರಿಸುವ ಅಪೂರ್ವ ಅವಕಾಶ ಅದಾಗಿತ್ತು. ಆದರೆ, ಈ ಎಲ್ಲಾ ಸಂದರ್ಭಗಳಲ್ಲಿಯು ನಮಗೆಲ್ಲ ಉಡುಗೊರೆಗಳನ್ನು ಕರುಣಿಸುತ್ತಿದ್ದವರು ಸ್ವಾಮಿಯೇ ಎಂಬುದು ವಿಶೇಷ. ಅವರು ಉದ್ಘಾಟಿಸಿದ ವಿವಿಧ ಸಂಸ್ಥೆಗಳಷ್ಟೇ ಅಲ್ಲದೆ, ತಮ್ಮ ನೈಜ ಸ್ವರೂಪವನ್ನು ನಮಗೆ ಮತ್ತೊಮ್ಮೆ ಸ್ಮರಿಸಿಕೊಡುವ ಸುಸಂದರ್ಭವೂ ಅದಾಗಿತ್ತು.
ವರ್ಷಗಳುದ್ದಕ್ಕೂ ನಡೆದ ಭಗವಾನರ ಜನ್ಮದಿನೋತ್ಸವಗಳ ಮಧುರ ನೆನಪುಗಳನ್ನು ಒಳಗೊಂಡ ಈ ಸಂಚಿಕೆಯನ್ನು ಅತ್ಯಂತ ಕೃತಜ್ಞತಾಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ. ಈ ದಿನವು ನಮ್ಮ ಜೀವನದ ಉದ್ದೇಶವನ್ನು ನಿರ್ಧರಿಸುವ ಸ್ಫೂರ್ತಿದಾಯಕ ದಿನವಾಗಲಿ ಎಂಬ ಹೃತ್ಪೂರ್ವಕ ಪ್ರಾರ್ಥನೆಯೊಂದಿಗೆ ಈ ಅರ್ಪಣೆಯನ್ನು ಸಲ್ಲಿಸುತ್ತೇವೆ.