ಶ್ರೀ ಸತ್ಯಸಾಯಿ ಸಾಕ್ಷ್ಯಚಿತ್ರ ಭಾಗ 8 - ಸಾಯಿ ಮಾತಾ ಸತ್ಯ ಮಾತಾ | Episode 8 | Sai Mata Sathya Mata
Published on October 18, 2026 08:30 AM
Documentaries
ಒಂದು ಜೀವಿಗೆ ದೊರೆಯುವ ಅತ್ಯಂತ ಪವಿತ್ರ ಆಶೀರ್ವಾದವೆಂದರೆ ತಾಯಿಯ ನಿಸ್ವಾರ್ಥ ಪ್ರೇಮ. ಹಾಗಿರುವಾಗ, ಸಾವಿರ ತಾಯಂದಿರ ಪ್ರೀತಿಗಿಂತಲೂ ಮಿಗಿಲಾದ ಪ್ರೀತಿಯನ್ನು ಪಡೆದಿರುವ ಜೀವಿಯ ಭಾಗ್ಯವನ್ನು ವರ್ಣಿಸಲು ಪದಗಳೇ ಸಾಲವು!
‘ಸಾಯಿ’ ಎಂಬ ನಾಮವು ‘ಸ-ಆಯಿ’ — ದಿವ್ಯ ಮಾತೆಯನ್ನು ಸೂಚಿಸುತ್ತದೆ ಎಂದು ಸ್ವಾಮಿ ಹೇಳುತ್ತಾರೆ. ಇಂತಹ ಸಾಯಿಯನ್ನು ನಮ್ಮ ಮಾತೆಯಾಗಿ ಪಡೆದಿರುವುದು, ನಾವು ಆಶಿಸಬಹುದಾದ ಸರ್ವಶ್ರೇಷ್ಠ ವರವಾಗಿದೆ.
ಅತ್ಯಂತ ಮಂಗಳಮಯವಾದ ದೇವಿ ನವರಾತ್ರಿ ಅಥವಾ ದಸರಾ ಹಬ್ಬವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಈ ಮಹದಾಶೀರ್ವಾದವನ್ನು ನಾವೆಲ್ಲರೂ ಒಟ್ಟಾಗಿ ಸ್ಮರಿಸೋಣ. ಸಮಸ್ತ ಜಗತ್ತಿನ ಮೇಲಿನ ಸ್ವಾಮಿಯ ಮಾತೃವಾತ್ಸಲ್ಯವು ನಮ್ಮೆಲ್ಲರಿಗೂ ವೇದವೈಭವದ ಅನನ್ಯ ಅನುಭವವಾಗಿ ಹೇಗೆ ಅಭಿವ್ಯಕ್ತವಾಯಿತು ಎಂಬುದನ್ನೂ ಮೆಲುಕು ಹಾಕೋಣ.
ಈ ಸಂಚಿಕೆಯು ಸ್ವಾಮಿಯನ್ನು ದಿವ್ಯ ಮಾತೆಯಾಗಿ ಸ್ತುತಿಸುವುದರ ಜೊತೆಗೆ, ಅವರ ಸನ್ನಿಧಿಯಲ್ಲಿ ನಡೆದ ದಸರಾ ಆಚರಣೆಗಳ ಇತಿಹಾಸವನ್ನೂ ದಾಖಲಿಸುತ್ತದೆ.