ಶ್ರೀ ಸತ್ಯಸಾಯಿ ಸಾಕ್ಷ್ಯಚಿತ್ರ ಭಾಗ 7 - ಸಾಯಿಕೃಷ್ಣನ ಶಾಶ್ವತ ಸಂದೇಶ | Sai Krishna's Eternal Message
Published on September 04, 2026 10:42 AM
Documentaries
"ಕೃಷ್ಣ ಎಂದರೆ ಗೀತೆ, ಗೀತೆ ಎಂದರೆ ಕೃಷ್ಣ" ಎಂದು ಭಗವಾನರು ಹೇಳುತ್ತಾರೆ. ಹೀಗಿರುವಾಗ ಶ್ರೀಕೃಷ್ಣನು ನೀಡಿದ ಅಮೂಲ್ಯ ಸಂದೇಶವನ್ನು ಗೌರವಿಸದೆ, ಆರಾಧಿಸದೆ ನಾವು ಕೃಷ್ಣತತ್ತ್ವವನ್ನು ಹೇಗೆ ತಾನೇ ಆಚರಿಸಲು ಸಾಧ್ಯ? ಭಗವದ್ಗೀತೆಯು ಉಪನಿಷತ್ತುಗಳ ಸಾರಸರ್ವಸ್ವವೆಂದು ಹೇಳಲಾಗುತ್ತದೆ. ದಿಕ್ಕುತೋಚದೆ ಗೊಂದಲಕ್ಕೊಳಗಾಗಿದ್ದ ಅರ್ಜುನನಿಗೆ ತನ್ನ ಅಪಾರ ಕರುಣೆಯಿಂದ ಈ ಅಮೃತವನ್ನು ಧಾರೆ ಎರೆದ ಅದೇ ಕೃಷ್ಣನು, ಆ ಸಂದೇಶವನ್ನು ನಮಗೆ ಮತ್ತಷ್ಟು ಸರಳಗೊಳಿಸಿ ನೀಡಲು ಇಂದು ಸಾಯಿ ಕೃಷ್ಣನಾಗಿ ನಮ್ಮ ನಡುವೆ ಪುನಃ ಅವತರಿಸಿದ್ದಾನೆ.
ಭಗವಾನರ ಜೀವನ ಮತ್ತು ಸಂದೇಶವನ್ನು ಕುರಿತಾದ ಈ ಸಾಕ್ಷ್ಯಚಿತ್ರ ಸರಣಿಯ ಸಂಚಿಕೆಯಲ್ಲಿ, ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನಾಗಿ ತಾನು ಬೋಧಿಸಿದ್ದನ್ನೇ ಶ್ರೀ ಸತ್ಯಸಾಯಿಯಾಗಿ ತಮ್ಮ ದಿವ್ಯವಾಣಿಯ ಮೂಲಕ ಹೇಗೆ ನೆನಪಿಸಿದ್ದಾರೆ ಎಂಬುದನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.