ಶ್ರೀ ಸತ್ಯಸಾಯಿ ಸಾಕ್ಷ್ಯಚಿತ್ರ ಭಾಗ 6 | ಸಾಯಿ ಭಜನೆ - ಭಗವಂತನೆಡೆಗೆ ರಾಜಮಾರ್ಗ | Sai Bhajans
Published on August 29, 2026 02:30 PM
Documentaries
ಭಗವಾನರು, ಪ್ರತಿಯೊಬ್ಬ ಭಕ್ತನೂ ಆಚರಿಸಬೇಕೆಂದು ಪ್ರೇರೇಪಿಸಿ, ಪ್ರೋತ್ಸಾಹಿಸಿದ ಅನೇಕ ಸಾಧನಾಮಾರ್ಗಗಳಲ್ಲಿ ಸಾಯಿ ಭಜನೆಗಳ ಮೂಲಕ ನಾಮಸ್ಮರಣೆಯೂ ಒಂದು. ನಾಮಸ್ಮರಣೆಯೇ ಭಗವಂತನೊಂದಿಗೆ ನೇರವಾಗಿ, ಸುಲಭವಾಗಿ ಮತ್ತು ನಿಶ್ಚಿತವಾಗಿ ಸಂಪರ್ಕ ಸಾಧಿಸುವ ಅತ್ಯಂತ ಶ್ರೇಷ್ಠ ಮಾರ್ಗವೆಂದು ಸ್ವಾಮಿ ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ.
ಸಾಯಿ ಭಜನಾ ಚಳುವಳಿಯ ಈ ಮಧುರ ಪ್ರವಾಹದ ಉಗಮ ಹೇಗಾಯಿತು? ಅಂದು ಪುಟ್ಟ ತೊರೆಯಂತೆ ಆರಂಭವಾದ ಈ ಪ್ರವಾಹ ಇಂದು ಅಸಂಖ್ಯಾತ ಹೃದಯಗಳನ್ನು ಆನಂದದಲ್ಲಿ ಮೀಯಿಸುವ ಆನಂದಸಾಗರವಾಗಿ ವಿಸ್ತರಿಸಿದೆ. ಸಾಯಿ ಭಜನೆಗಳ ವಿವಿಧ ಆಯಾಮಗಳೇನು? ಅವುಗಳ ಅಂತರಾರ್ಥವೇನು? ಎಲ್ಲಕ್ಕಿಂತ ಮುಖ್ಯವಾಗಿ, ಸಾಯಿ ಭಜನೆಗಳ ಈ ಪವಿತ್ರ ಮಾಧ್ಯಮದ ಮೂಲಕ ಪ್ರತಿಯೊಬ್ಬ ಭಕ್ತನೂ ಚಿರಂತನ ಶಾಂತಿಯನ್ನು ಅನುಭವಿಸಿ, ಸಾಯಿಯ ದಿವ್ಯ ಸಾನ್ನಿಧ್ಯವನ್ನು ಅರಿಯಲು ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಭಗವಾನರು ನೀಡಿದ ನೇರ ಮಾರ್ಗದರ್ಶನವೇನು?
ಇಂದು ‘ಸತ್ಯಸಾಯಿ’ ಮತ್ತು ‘ಸಾಯಿ ಭಜನೆ’ ಎಂಬ ಹೆಸರುಗಳು ಒಂದಕ್ಕೊಂದು ಅವಿನಾಭಾವವಾಗಿ ಬೆಸೆದುಕೊಂಡಿವೆ. ಭಗವಾನರು ಸಮಸ್ತ ಮಾನವಕುಲಕ್ಕೆ ನೀಡಿದ ಈ ಅಪೂರ್ವ ದಿವ್ಯ ಕೊಡುಗೆಯಾದ ಸಾಯಿ ಭಜನೆಗಳ ಉಗಮ, ವಿಕಾಸ, ವೈಶಿಷ್ಟ್ಯ ಮತ್ತು ಆಧ್ಯಾತ್ಮಿಕ ಪ್ರಗಾಢತೆಯನ್ನು ಈ ಸಾಕ್ಷ್ಯಚಿತ್ರ ಅನಾವರಣಗೊಳಿಸುತ್ತದೆ.
ಶ್ರೀ ಸತ್ಯಸಾಯಿ ಅವತಾರದ ಆಗಮನದ ಹಿಂದಿರುವ ಅನೇಕ ಅಪೂರ್ವ ಸಂಗತಿಗಳು, ಅಮೂಲ್ಯ ಒಳನೋಟಗಳು ಮತ್ತು ಆಧ್ಯಾತ್ಮಿಕ ರಹಸ್ಯಗಳನ್ನು ತಿಳಿದುಕೊಳ್ಳುತ್ತಾ, ಅವುಗಳ ದಿವ್ಯಾನುಭವದಲ್ಲಿ ಮಿಂದೇಳಲು ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ.