ನವರಾತ್ರಿ ನವಸಂಕಲ್ಪ | ದಿನ 5 | ಸಮುದಾಯ ಸೇವೆಯಲ್ಲಿ ಭಾಗವಹಿಸುವಿಕೆ | Navaratri NavaSankalpa | Day 5
Published on October 16, 2026 06:24 PM
Talks
ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಮ್ಮಲ್ಲಿರುವ ದುರ್ಗುಣಗಳನ್ನು ದೂರಮಾಡಿಕೊಂಡು ತ್ರಿಕರಣ ಶುದ್ಧಿಯನ್ನು ಸಾಧಿಸಲು ಸ್ವಾಮಿ ನಮಗೆ ಒಂಬತ್ತು ಅಂಶಗಳ ನೀತಿಸಂಹಿತೆಯನ್ನು ನೀಡಿದ್ದಾರೆ. ಇದನ್ನು ಕೇವಲ ತಿಳಿದುಕೊಳ್ಳುವುದಕ್ಕೆ ಸೀಮಿತಗೊಳಿಸದೆ, ಒಂದು ಸಾಧನೆಯಾಗಿ ಸ್ವೀಕರಿಸೋಣ.
ಪ್ರತಿದಿನ ಒಂದೊಂದು ನೀತಿಸಂಹಿತೆಯ ಮಹತ್ವವನ್ನು ಅರಿತು, ಅದನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರುವ ಸಂಕಲ್ಪ ಮಾಡೋಣ. ಈ ಮೂಲಕ ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಶುದ್ಧತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ನೀತಿ ಸಂಹಿತೆ: ಸಾಯಿ ಸಾಹಿತ್ಯದ ನಿಯಮಿತ ಅಧ್ಯಯನ
ನವರಾತ್ರಿ ಸಂಕಲ್ಪ: ‘ಸತ್ಯಸಾಯಿ ವಾಣಿ’ ಸಂಪುಟ 1ರ ಮೊದಲ ಅಧ್ಯಾಯದ ಪಠನವನ್ನು ಪ್ರಾರಂಭಿಸೋಣ. ಸ್ವಾಮಿಯ ದಿವ್ಯ ಸಂದೇಶಗಳನ್ನು ಓದಿ, ಅವುಗಳ ಅಂತರಾರ್ಥವನ್ನು ಅರಿತುಕೊಂಡು, ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸತ್ಸಂಗಗಳಲ್ಲಿ ಭಾಗವಹಿಸುವ ಮೂಲಕ ಈ ಅಭ್ಯಾಸವನ್ನು ಮತ್ತಷ್ಟು ಅರ್ಥಪೂರ್ಣವಾಗಿಸೋಣ ಹಾಗೂ ಪರಸ್ಪರ ವಿಚಾರ ವಿನಿಮಯದ ಮೂಲಕ ಆಧ್ಯಾತ್ಮಿಕ ಅರಿವನ್ನು ಬೆಳೆಸಿಕೊಳ್ಳೋಣ.
Today's Code of Conduct: Regular Study of Sai Literature.
Navaratri Sankalpa for today: Let us start with reading the 1st chapter of Sathya Sai Speaks Volume 1.
Let us read Sai literature, understand it well and practice in our daily lives. By participating in Satsangs let us improve our knowledge about these teachings, and with mutual discussions let us improve our Spiritual knowledge.