ಚಂಡೀ ಸಪ್ತಾಹ 2026 | ದಿನ 3 | ಬೃಂದಾವನ | Chandi Saptaha 2026 | Day 3 | Brindavan
Published on October 20, 2026 02:30 PM
Mandir/LIVE Events
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು, ಕರ್ನಾಟಕ ದಕ್ಷಿಣದ ವತಿಯಿಂದ ಆಯೋಜಿಸಿರುವ ಶ್ರೀ ಸತ್ಯಸಾಯಿ ಚಂಡೀ ಸಪ್ತಾಹವು ಬೃಂದಾವನ ಆಶ್ರಮದ ಸಾಯಿ ಕಿಶನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಮೂರನೆಯ ದಿನವಾದ ಅಕ್ಟೋಬರ್ 13, 2026 ರಂದು, ದುರ್ಗಾ ಸಪ್ತಶತಿ ಪಾರಾಯಣ, ದುರ್ಗಾ ಹೋಮ, ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಶ್ರೀ ಸತ್ಯಸಾಯಿ ಅಷ್ಟೋತ್ತರ ಪೂಜೆ ನೆರವೇರಿತು. ಬೆಂಗಳೂರು ಪೂರ್ವ ಜಿಲ್ಲೆಯ ಬಾಲ ವಿಕಾಸದ ಮಕ್ಕಳು “ದೇವಿ ಮಹಾತ್ಮ್ಯಂ” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಮರ್ಪಿಸಿದರು. ಯುವ ವಿಭಾಗದ ಶ್ರೀಯುತ ತರುಣ್ ಕುಮಾರ್ ಅವರು “ಪ್ರಶಾಂತಿ – ಪರಮ ಗುರಿ” ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದರು. ಭಕ್ತರು ಭಗವಾನರ ದಿವ್ಯೋಪನ್ಯಾಸದಿಂದ ಆಶೀರ್ವದಿಸಲ್ಪಟ್ಟರು.