Watch - ಶ್ರೀ ಎನ್. ಸುಧೀಂದ್ರನ್ | ಭಾಗ 2 | ಸಾಯಿ ಅನುಭವಾಮೃತ | Sri N. Sudhindran | Episode 2 | Sai Anubhavamrutha - Sri Sathya Sai | Sri Sathya Sai Media Centre
ಶ್ರೀ ಎನ್. ಸುಧೀಂದ್ರನ್ | ಭಾಗ 2 | ಸಾಯಿ ಅನುಭವಾಮೃತ | Sri N. Sudhindran | Episode 2 | Sai Anubhavamrutha
Published on October 11, 2026 02:30 PM
Talks
‘ಅನುಭವಾಮೃತ'ದ ಮೊದಲ ಭಾಗದಲ್ಲಿ, ಭಗವಾನ್ ಬಾಬಾ ಅವರು ತಮ್ಮ ಹೃದಯದಲ್ಲಿ ನಂಬಿಕೆಯ ಬೀಜವನ್ನು ಹೇಗೆ ಬಿತ್ತಿದರು ಎಂಬುದನ್ನು ವಿವರಿಸಿದ್ದ ಶ್ರೀ ಎನ್. ಸುಧೀಂದ್ರನ್ ಅವರು, ಪ್ರಸ್ತುತ ಸಂಚಿಕೆಯಲ್ಲಿ ಆ ಭಕ್ತಿಬೀಜವನ್ನು ಸ್ವಾಮಿ ಹೇಗೆ ಪೋಷಿಸಿ, ಬೆಳೆಸಿದರು ಎಂಬುದನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. “ನನ್ನದು ಸಾವಿರ ತಾಯಂದಿರ ಪ್ರೇಮ” ಎಂದು ಹೇಳುವ ಸಾಯಿಮಾತೆಯ ಮಾತೃವಾತ್ಸಲ್ಯವನ್ನು ಸ್ವತಃ ಅನುಭವಿಸಿದ ಕ್ಷಣಗಳನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, “ಸ್ವಾಮಿಯೊಂದಿಗೆ ಜೀವಿಸುವುದೇ ನಿಜವಾದ ಶಿಕ್ಷಣ” ಎಂಬ ಸತ್ಯವನ್ನು ತಮ್ಮ ಜೀವನಾನುಭವಗಳ ಮೂಲಕ ಅನಾವರಣಗೊಳಿಸುತ್ತಾ, ಸ್ವಾಮಿಯ ಸಾನ್ನಿಧ್ಯ ನೀಡಿರುವ ಅಮೂಲ್ಯ ಪಾಠಗಳನ್ನು ಸ್ಮರಿಸಿದ್ದಾರೆ.