ನವರಾತ್ರಿ ನವಸಂಕಲ್ಪ | ದಿನ 2 | ಕುಟುಂಬದ ಸದಸ್ಯರೊಂದಿಗೆ ಸೇರಿ ಭಜನೆ | Navaratri NavaSankalpa | Day 2
Published on October 12, 2026 06:30 AM
Talks
ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಮ್ಮಲ್ಲಿರುವ ದುರ್ಗುಣಗಳನ್ನು ದೂರಮಾಡಿಕೊಂಡು ತ್ರಿಕರಣ ಶುದ್ಧಿಯನ್ನು ಸಾಧಿಸಲು ಸ್ವಾಮಿ ನಮಗೆ ಒಂಬತ್ತು ಅಂಶಗಳ ನೀತಿಸಂಹಿತೆಯನ್ನು ನೀಡಿದ್ದಾರೆ. ಇದನ್ನು ಕೇವಲ ತಿಳಿದುಕೊಳ್ಳುವುದಕ್ಕೆ ಸೀಮಿತಗೊಳಿಸದೆ, ಒಂದು ಸಾಧನೆಯಾಗಿ ಸ್ವೀಕರಿಸೋಣ.
ಪ್ರತಿದಿನ ಒಂದೊಂದು ನೀತಿಸಂಹಿತೆಯ ಮಹತ್ವವನ್ನು ಅರಿತು, ಅದನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರುವ ಸಂಕಲ್ಪ ಮಾಡೋಣ. ಈ ಮೂಲಕ ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಶುದ್ಧತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ನೀತಿ ಸಂಹಿತೆ: ವಾರಕ್ಕೊಮ್ಮೆ ಕುಟುಂಬದ ಸದಸ್ಯರೊಂದಿಗೆ ಸೇರಿ ಭಜನೆ ಅಥವಾ ಪ್ರಾರ್ಥನೆಯಲ್ಲಿ ತೊಡಗುವುದು.
ನವರಾತ್ರಿ ಸಂಕಲ್ಪ: ಇಂದು ನಮ್ಮ ಕುಟುಂಬದೊಂದಿಗೆ ದೇವಿಯ ಭಜನೆಯನ್ನು ಹಾಡೋಣ. ಪ್ರತಿ ವಾರವೂ ಒಂದು ಭಜನೆಯನ್ನು ಒಟ್ಟಾಗಿ ಹಾಡುವ ಮೂಲಕ ನಮ್ಮ ಮನೆಗಳಲ್ಲಿ ಭಕ್ತಿಯ ವಾತಾವರಣವನ್ನು ಬೆಳೆಸೋಣ ಮತ್ತು ಭಗವಂತನ ಪ್ರೇಮಾನುಗ್ರಹಕ್ಕೆ ಪಾತ್ರರಾಗೋಣ.
Today's Code of Conduct: Devotional Singing/Prayer with members of the family once a week
Navaratri Sankalpa for today: Today let us sing a Devi bhajan with our family. Let us make it a practice to sing at least one bhajan per week with our family.