ನವರಾತ್ರಿ ನವಸಂಕಲ್ಪ | ದಿನ 1 | ಪ್ರತಿ ನಿತ್ಯ ಧ್ಯಾನ ಮತ್ತು ಪ್ರಾರ್ಥನೆ | Navaratri NavaSankalpa | Day 1
Published on October 11, 2026 06:30 AM
Talks
ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಮ್ಮಲ್ಲಿರುವ ದುರ್ಗುಣಗಳನ್ನು ದೂರಮಾಡಿಕೊಂಡು ತ್ರಿಕರಣ ಶುದ್ಧಿಯನ್ನು ಸಾಧಿಸಲು ಸ್ವಾಮಿ ನಮಗೆ ಒಂಬತ್ತು ಅಂಶಗಳ ನೀತಿಸಂಹಿತೆಯನ್ನು ನೀಡಿದ್ದಾರೆ.
ಇದನ್ನು ಕೇವಲ ತಿಳಿದುಕೊಳ್ಳುವುದಕ್ಕೆ ಸೀಮಿತಗೊಳಿಸದೆ, ಒಂದು ಸಾಧನೆಯಾಗಿ ಸ್ವೀಕರಿಸೋಣ. ಪ್ರತಿದಿನ ಒಂದೊಂದು ನೀತಿಸಂಹಿತೆಯ ಮಹತ್ವವನ್ನು ಅರಿತು, ಅದನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರುವ ಸಂಕಲ್ಪ ಮಾಡೋಣ.
ಈ ಮೂಲಕ ನಮ್ಮ ಆಲೋಚನೆ, ಮಾತು ಮತ್ತು ಕೃತಿಗಳಲ್ಲಿ ಶುದ್ಧತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ನೀತಿ ಸಂಹಿತೆ: ಪ್ರತಿನಿತ್ಯ ಜಪ ಮತ್ತು ಧ್ಯಾನ ಮಾಡುವುದು.
ನವರಾತ್ರಿ ಸಂಕಲ್ಪ: ಪ್ರತಿನಿತ್ಯ ಒಂಬತ್ತು ಬಾರಿ ಸಾಯಿ ಗಾಯತ್ರಿ ಮಂತ್ರವನ್ನು ಜಪಿಸುವುದು.
Today's Code of Conduct: Daily Prayers and Meditation
Navaratri Sankalpa for today: Daily chanting of Gayatri Mantra at least 9 times